ಚಿತ್ರದ ಯಶಸ್ಸಿನ ಹಿಂದಿನ ಶಕ್ತಿ ಸಹ ಹಾಗೂ ಸಹಾಯಕ ನಿರ್ದೇಶಕರು
Posted date: 15 Mon, Jun 2015 – 08:48:21 AM

ಒಂದು ಚಿತ್ರ ಹಿಟ್ ಆದ ಕೂಡಲೆ ಅದರ ಕ್ರೆಡಿಟ್ ನಾಯಕ, ನಿರ್ದೇಶಕರಿಗೆ ಸಲ್ಲುತ್ತದೆ. ಆದರೆ ಪ್ರಾರಂಭದಿಂದ ಅಂತ್ಯದವರೆಗೂ ಶ್ರಮವಹಿಸಿದ ಸಹ ಹಾಗೂ ಸಹಾಯಕ ನಿರ್ದೇಶಕರ ಪಾತ್ರ ಯಾರ ಕಣ್ಣಿಗೂ ಬೀಳುವುದಿಲ್ಲ ಎಂದು ನಾನಾ ಸಂಕೀರ್ಣದಲ್ಲಿ ಚಿತ್ರ ಧುರೀಣರು ಹೇಳಲು ಸಾಕ್ಷಿಯಾಗಿದ್ದು  ಕರ್ನಾಟಕ ಚಲನಚಿತ್ರ  ಸಹ ಹಾಗೂ ಸಹಾಯಕ ನಿರ್ದೇಶಕರ ಸಂಘದ ಐದನೇ ವಾರ್ಷಿಕೋತ್ಸವ ಪ್ರಶಸ್ತಿ ಸಂಭ್ರಮ. ನಾಂದಿಯಲ್ಲಿ ಮಾತನಾಡಿದ್ದು ನಾಗತ್ತಿಹಳ್ಳಿ ಚಂದ್ರಶೇಖರ್. ಅವರು ಸಂಘವು ಪ್ರಾರಂಭವಾಗಿ ಐದನೇ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ. ಸೃಜನಶೀಲ ಮನಸುಗಳಿಗೆ ನಿತ್ಯೋತ್ಸವ ಆಗಲಿ. ಚಿತ್ರರಂಗಕ್ಕೆ ಪ್ರತಿ ವಿಭಾಗದಲ್ಲಿ ಸಹಾಯಕರು ಇದ್ದಾರೆ. ಇವರಿಗೆ ಮಾತ್ರ ಇರುವುದಿಲ್ಲ.   ಚಿತ್ರಕ್ಕೆ ಶ್ರಮವಹಿಸಿ ಕೆಲಸ ಮಾಡಬೇಕು. ನಿಮ್ಮ ಕನಸುಗಳು ಬಂಡವಾಳ ಹೂಡುವ  ನಿರ್ಮಾಪಕರನ್ನು ಓಲೈಸುವ ಜಾಣ್ಮೆ ಇರಬೇಕು. ಇವೆರಡು ಇದ್ದಲ್ಲಿ ಉಳಿಯಲು ಸಾಧ್ಯ. ಇದಕ್ಕೆ ಅಣಿವಾಗದಿದ್ದರೆ ಪರಭಾಷಾ ತಂತ್ರಜ್ಘರ ಮಧ್ಯೆ ನಿಲ್ಲಲು ಕಷ್ಟವಾಗುತ್ತದೆ. ನನ್ನದೆ ಶಾಲೆ ಟೆಂಟ್‌ಸಿನಿಮಾದಲ್ಲಿ ತಾವುಗಳು ಇನ್ನು ಹೆಚ್ಚಿನ ರೀತಿಯಲ್ಲಿ ಕೆಲಸ ಕಲಿಯಬಹುದು. ಪ್ರಸಕ್ತ ಹೆಣ್ಣುಮಕ್ಕಳು ನಿರ್ದೇಶನ ಕಲಿಯಲು ಬರುತ್ತಿರುವುದು ಶುಭಸೂಚನೆ ಎಂದರು. ನಮ್ಮ ನಾಡಿನ ಸಂಸ್ಕ್ರತಿ ಇರುವುದರಿಂದಲೆ ಬೇರೆ ಭಾಷಯ ಸಹಾಯಕ ನಿರ್ದೇಶಕರನ್ನು  ಕರೆದು ಸನ್ಮಾನಿಸಿದ್ದಾರೆ. ಅದೇ ಕೆಲಸವನ್ನು ಅಲ್ಲಿ ನೀವು ಮಾಡಿ ನಮ್ಮವರನ್ನು ಆಹ್ವಾನಿಸಿ. ಕಲಾವಿದರಿಗೆ ಓಂಕಾರ ಹಾಕುವುದು ನೀವುಗಳು. ಕೆಲವು ಸಲ ನಿರ್ದೇಶಕರಿಗಿಂತ ಸಹಾಯಕರು ಹೆಚ್ಚು ಬುದ್ದಿವಂತರಾಗಿರುತ್ತಾರೆ. ನಿರ್ಮಾಪಕರು, ಕಲಾವಿದರು, ನಿರ್ದೇಶಕರು, ಚಿತ್ರಮಂದಿರದಿಂದ ಹೆಚ್ಚಾಗಿ ಕ್ಲೀಷೆಗೆ ಒಳಗಾಗುವುದು ಸಹಾಯಕರು ಅಂತ ಚಿನ್ನಕ್ಕೆ ಹೋಲಿಸಿದರು ತಾರಾ.
        ಸಹಾಯಕರನ್ನು ಕರಿಬೇವಿನ ಸೊಪ್ಪಿಗೆ ಹೋಲಿಸಿದನ್ನು ಖಂಡಿಸಿದ ರಮೇಶ್‌ಅರವಿಂದ್ ಉತ್ತಮವಿಲನ್ ಸಹಾಯಕರು ತಿಂಗಳಿಗೆ ಒಂದೂವರೆ ಲಕ್ಷ ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಅದರಂತೆಯೇ ಇಲ್ಲಿ ಆಗಬೇಕು. ಇವರಿಲ್ಲದಿದ್ದರೆ ಸಿನಿಮಾ ಪೂರ್ತಿಗೊಳ್ಳುವುದಿಲ್ಲ. ಪ್ರಾರಂಭದಲ್ಲಿ ಇವರ ಕೆಲಸ ಏನು ಅಂತ ಅರಿತಿದ್ದೇನೆ. ಇವರು ನಿರ್ದೇಶಕರಿಗೆ ಬಲಗೈ ಇದ್ದಂಗೆ. ಸಂಘವನ್ನು ಹುಟ್ಟುಹಾಕಿರುವುದು ಅದ್ಬುತ ಕೆಲಸ. ತಾವು ಇಂದಿನ ತಾಂತ್ರಿಕ ಕೆಲಸಕ್ಕ್ಕೆ ಸರಿಹೊಂದಬೇಕು.ಎಲ್ಲವನ್ನು ಕಲಿತುಕೊಂಡರೆ ಭವಿಷ್ಯ ಇದೆ. ಗೋಡೆ ಕಟ್ಟಬೇಕಾದರೆ ಕಲ್ಲುಗಳ ಮಧ್ಯೆ ಸಣ್ಣ ಕಲ್ಲುಗಳು ಇರುತ್ತವೆ. ಅದನ್ನು ಕಿತ್ತು ಹಾಕಿದರೆ ಗೋಡೆ ಬೀಳುತ್ತದೆ. ಅಂತಹ ಸಣ್ಣ ಕಲ್ಲುಗಳು ಸಹಯಾಕ ನಿರ್ದೇಶಕರು ಎಂದು ಅಭಿಮಾನದ ಮಾತುಗಳನ್ನು ಆಡಿದರು. ನಿಮ್ಮಲ್ಲಿ ಒಗ್ಗಟು ಇಲ್ಲದೆ ಇರುವುದರಿಂದಲೇ ನಾಯಕ ನಟ ಕೊಠಡಿಯಲ್ಲಿ ಕೂಡಿಹಾಕಿ ನಿರ್ದೇಶಕರನ್ನು ಥಳಿಸಿದ್ದು. ಎಲ್ಲರು ಒಂದಾಗಿ ಶಕ್ತಿ ಪ್ರದರ್ಶಿಸಿ ಎನ್ನುತ್ತಾ ಇತ್ತೀಚಿನ ಒಕ್ಕೂಟದ ಬೆಳವಣಿಗೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು ಹಿರಿಯ ನಟ ಹಾಗೂ ಒಕ್ಕೂಟದ ಅಧ್ಯಕ್ಷ ಅಶೋಕ್. ಸಹಾಯಕ ನಿರ್ದೇಶಕರಿಗೆ ಕನಿಷ್ಟ ಸಂಭಾವನೆ ನಿಗದಿ ಪಡಿಸಬೇಕು ಅಂತ ಭಿನ್ನಹ ಮಾಡಿಕೊಂಡಿದ್ದು ರವೀಂದ್ರನಾಥ್. ಇದಕ್ಕೂ ಮುನ್ನ ಮಾತನಾಡಿದ ಕಾಲಿವುಡ್‌ನಲ್ಲಿ ಸಹಾಯಕ ನಿರ್ದೇಶಕರಾಗಿರುವ ಶಿವಸುಬ್ರಮಣ್ಯನ್ ನಮ್ಮದು ಸಂಘ ಇರುವುದು ಸೋಜಿಗ ಏನಿಸಿದೆ. ಕರ್ನಾಟಕ ಯೂನಿಯನ್ ಈಸ್  ಬಾನಿಯನ್ ಟ್ರೀ ಅಂತ ಬಣ್ಣಿಸಿದರು. ನಮ್ಮಲ್ಲಿ ಮೂವತ್ತೈದು ವರ್ಷದಿಂದ ಸಹಾಯಕ ಕೆಲಸ ಮಾಡುತ್ತಿರುವವರು ಪುತ್ರನ ಚಿತ್ರದಲ್ಲೂ ಅದೇ ಹುದ್ದೆಯಲ್ಲಿ ಇದ್ದಾರೆ ಎನ್ನುತ್ತಾರೆ. ಟಾಲಿವುಡ್‌ನ ಸುರೇಶ್‌ಕುಮಾರ್ ಎಲ್ಲಾ ಸಹಾಯಕ ನಿರ್ದೇಶಕರು ನಿರ್ದೇಶಕರು ಆಗಬೇಕು ಎಂಬ ಪಸೆಯನ್ನು ವ್ಯಕ್ತಪಡಿಸಿದರು.
          ಐವತ್ತು ಕೋಟಿ ಬಾಚಿಕೊಂಡ ಮಿ.ಅಂಡ್ ಮಿಸಸ್ ರಾಮಾಚಾರಿ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಕೆಲವು ವರ್ಷದ ಹಿಂದೆ ನಿಮ್ಮಗಳ ಜಾಗದಲ್ಲಿ ಇದ್ದೆ. ಚಿಂಗಾರಿ ಮೂಲಕ ಚಿತ್ರರಂಗ ಪ್ರವೇಶಿಸಿ ಸಂಭಾಷಣೆ, ಚಿತ್ರಕತೆ ಬರೆದುಕೊಂಡು, ಗಜಕೇಸರಿ ಸಮಯದಲ್ಲಿ ಯಶ್‌ಗೆ ಕತೆ  ಹೇಳಿ ಒಪ್ಪಿಸಿ ಅದು ಹಿಟ್ ಆಗಿದ್ದು ಇತಿಹಾಸ. ನಿಮ್ಮಲ್ಲಿ ಪ್ರತಿಭೆ, ಶ್ರದ್ದೆ ಇದ್ದರೆ ಖಂಡಿತ ನೀವುಗಳು ನಿರ್ದೇಶಕರಾಗಿ ಬರುತ್ತಿರಾ. ಸಂಘಕ್ಕೆ ಕೊನೆವರೆಗೂ ನನ್ನ ಬೆಂಬಲ ಇರುತ್ತೆ ಎಂಬುದು ಅವರ ನುಡಿ. ಸಂಘವು ಹುಟ್ಟಿದ ನೆನಪು ಮಾಡಿಕೊಂಡ ಮೈತ್ರಿ ಚಿತ್ರದ ನಿರ್ದೇಶಕ ಗಿರಿರಾಜು ಸಹಾಯಕ ನಿರ್ದೇಶಕರನ್ನು ಕೆಲಸಗಾರ, ಸೃಜನಾತ್ಮಕರು ಎಂದು ಗುರುತಿಸುವುದು ಗೊಂದಲವಾಗಿದೆ. ನಿರ್ದೇಶಕನಾಗಿ ಇಲ್ಲಿಯವರೆಗೂ ಹಣ ನೋಡಿಲ್ಲ. ಸರ್ವಾಂಗೀಣ ಕೊರತೆ ಇದೆ ಅಂತ ಅಭಿಪ್ರಾಯಪಟ್ಟರು. ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಎಲ್ಲರ ಮಾತನ್ನು ದೃಡೀಕರಿಸಿ ನಿರ್ದೇಶಕರು ಸಂಭಾವನೆ ತೆಗೆದುಕೊಳ್ಳುವ ಸಮಯದಲ್ಲಿ ಸಹಾಯಕರಿಗೆ ಇಂತಿಷ್ಟು ಅಂತ ಕೊಡಬೇಕು ಅಂತ ನಿರ್ಮಾಪಕರಿಗೆ ಹೇಳಬೇಕು. ಸಹಾಯಕರನ್ನು ಕೊನೆತನಕ ನೋಡಿಕೊಳ್ಳುವ ಜವಬ್ದಾರಿ ನಿರ್ದೇಶಕದ್ದ್ದು ಆಗಿರುತ್ತದೆ. ಅನ್ಯಾಯವಾದರೆ ಸಾಮೂಹಿಕವಾಗಿ ಕೆಲಸ ನಿಲ್ಲಿಸಿ. ಸಂಕುಚಿತ ಮನೋಭಾವ ಮಾಡದೆ ನ್ಯಾಯಯುತವಾಗಿ ಹೋರಾಟ ನಡೆಸಿ. ಸಂಬಳ ಬೇರೆ, ಸೃಜನಾತ್ಮಕ ಬೇರೆ. ದ್ವೇಷದಿಂದ ಅಸೂಯೆ ಪಡುವುದು ಒಳ್ಳೆಯದಲ್ಲ ಅಂತ ಹಿತಿನುಡಿಗಳನ್ನು ಹೇಳಿದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್‌ಡಿಸೋಜ ಚಿತ್ರರಂಗಕ್ಕೆ ಸಹಾಯಕರು ಅವಶ್ಯಕವಾಗಿದೆ ಎಂದರು. ಪ್ರಶಸ್ತಿ ಚಿತ್ರಗಳಾದ ಹರಿವು, ಹಜ್, ಜಟ್ಟ, ಅಗಸಿ ಪಾರ್ಲರ್, ಹಾಡುಹಕ್ಕಿಹಾಡು ನಿರ್ದೇಶಕರು, ಸಹ ಮತ್ತು ಸಹಾಯಕ ನಿರ್ದೇಶಕರು ಸನ್ಮಾನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ಕೆಗೊಂಡ ಕುಶಾಲ್,ಮರಳಿಗೂಡಿಗೆ, ಲೆಮೆನ್‌ರೈಸ್ ತಂಡವನ್ನು ಗೌರವಿಸಲಾಯಿತು. ಎರಡೂವರೆ ಘಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಕ್ರಮವು ಅರ್ಥಪೂರ್ಣವಾಗಿತ್ತು.


GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed